News & Events

Kannada Rajyotsava report

ಪ್ರತೀ ವರ್ಷದಂತೆ ಈ ವರ್ಷವೂ ಸಂತ ಜೋಸೆಫರ ಪದವಿ ಪೂರ್ವ ಸಂಜೆ ಕಾಲೇಜು ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ ಬೆಂಗಳೂರು ೫೬೦೦೨೫, ಇಲ್ಲಿ ಈ ವರ್ಷವೂ ನುಡಿ ಜಾತ್ರೆ ೨೦೨೦ (ಕನ್ನಡ ರಾಜ್ಯೋತ್ಸವ ) ಹಾಗೂ ಮಕ್ಕಳ ದಿನಾಚರಣೆಯನ್ನು ಒಟ್ಟೊಟ್ಟಿಗೆ ದಿನಾಂಕ ೨೩:೧೧:೨೦೨೦ ರಂದು ಸಂಜೆ ೦೪:೩೦ ರ ಸುಮಾರಿಗೆ ವರ್ಚುವಲ್ ಕಾರ್ಯಕ್ರಮ ಜೂಮ್ ಆಪ್ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂದನೀಯ ಸ್ವಾಮಿ ಅರುಣ್ ಡಿ' ಸೋಜಾ ಯೇ.ಸ ನಿರ್ದೇಶಕರು ಸಂತ ಜೋಸೆಫರ ಪದವಿ ಪೂರ್ವ ಸಂಜೆ ಕಾಲೇಜು ಇವರು ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಆರಂಭಿಸಲಾಯಿತು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಹಿಂದಿ ಭಾಷಾ ವಿಭಾಗದ ಉಪನ್ಯಾಸಕರಾದ ಡಾ.ನಾಗರಾಜು ಪಿ ಅವರು ನಂತರ ಸ್ವಾಗತ ಭಾಷಣವನ್ನು ಇತಿಹಾಸ ವಿಭಾಗದ ಉಪನ್ಯಾಸಕರಾದ ಶ್ರೀ ರಮೇಶ್ ರವರು ಮಾಡುವುದರ ಮೂಲಕ ಕಾರ್ಯಕ್ರಮ ಅಧಿಕೃತವಾಗಿ ಚಾಲನೆಗೊಂಡಿತು. ಮುಖ್ಯ ಭಾಷಣ ಮತ್ತು ಮುಖ್ಯ ಭಾಷಣಕಾರರಾಗಿ ಡಾ.ನಾಗೇಂದ್ರ ಜಿ.ಬಿ ಮುಖ್ಯಸ್ಥರು ಕನ್ನಡ ವಿಭಾಗ ಇವರು ನಾಡು ನುಡಿ, ನೆಲ ಜಲ ಮತ್ತು ಕನ್ನಡಕ್ಕೆ ಆಗಬೇಕಾಗಿರುವ ಕಾರ್ಯ ಸ್ವರೂಪದ ಬಹು ಸೂಕ್ಷ್ಮ ಸಂಗತಿಗಳನ್ನು ಚರ್ಚಿಸಿದರು. ಭಾಷೆ ಸಾಹಿತ್ಯಗಳ ಅಭಿವೃದ್ಧಿಗೆ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯ ಬೇಕಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ಶ್ರೀಮಂತ ಭಾಷೆಯಲ್ಲಿ ಮಾತ್ರವೇ ವಿಚಾರಗಳು ಸ್ಪಂದಿಸಬಲ್ಲವು. ಭಾಷೆಯ ರಕ್ಷಣೆ ಹಾಗೂ ಸಂವರ್ಧನೆ ಅದರ ಬಳಕೆ ಹಾಗೂ ಪ್ರಚಾರವನ್ನು ಹೆಚ್ಚಿಸುವುದಕ್ಕೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿರುವುದನ್ನು ಒತ್ತಿ ಹೇಳುವುದರ ಮೂಲಕ ... ಜೊತೆಗೆ ಮಕ್ಕಳ ದಿನಾಚರಣೆಯ ಮಹತ್ವ ಅದರ ಹುಟ್ಟು ಬೆಳವಣಿಗೆ ಇತ್ಯಾದಿ ವಿಚಾರಗಳನ್ನು ಹೇಳುವುದರೊಂದಿಗೆ ಮುಖ್ಯ ಭಾಷಣವನ್ನು ಮುಗಿಸಿದರು. ತದ ನಂತರ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಕ್ಟರ್ ಅಂತೋಣಿ ಎನ್ ಅವರು ನಾಡು ನುಡಿಯ ಬಗ್ಗೆ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಮಹತ್ವವನ್ನು ಕುರಿತು ಮತ್ತು ಅದನ್ನು ಪ್ರತೀ ವರ್ಷ ಆಚರಿಸಿಕೊಂಡು ಬರುವುದರ ಔಚಿತ್ಯ ಕುರಿತು ಚಿಕ್ಕದಾಗಿ ಚೊಕ್ಕವಾಗಿ ಹೇಳಿ ವಿದ್ಯಾರ್ಥಿ ಮಕ್ಕಳನ್ನು ಹರಸಿ ಆಶೀರ್ವದಿಸುವುದರೊಂದಿಗೆ ತಮ್ಮ ಮಾತನ್ನು ಮುಗಿಸಿದರು. ( ಅಧ್ಯಕ್ಷತೆ ವಹಿಸಿದ್ದ ಫಾದರ್ ಅವರು ಅನ್ಯ ಕಾರ್ಯ ನಿಮಿತ್ತ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೆ ಇದ್ದುದರಿಂದ ಅವರ ಬರಹ ರೂಪದ ಭಾಷಣ ಮತ್ತು ಸಂದೇಶವನ್ನು ಮಕ್ಕಳಿಗೆ ಓದಿ ಹೇಳಿದರು). ಕಾರ್ಯಕ್ರಮದ ಕೊನೆಯ ಭಾಗವಾಗಿ ವಂದನಾರ್ಪಣೆಯನ್ನು ಸಂಖ್ಯಾಶಾಸ್ತ್ರದ ಉಪನ್ಯಾಸಕರಾದ ಶ್ರೀ ಪ್ರಕಾಶ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮೃದು ಮಧುರವಾದ ಧ್ವನಿಯಿಂದ ನಿರೂಪಿಸಿದವರು ನನ್ನ ಸನ್ಮಿತ್ರರು ಆತ್ಮೀಯರೂ ಕನ್ನಡ ಉಪನ್ಯಾಕರೂ ಆದ ಶ್ರೀಯುತ ಭಾಸ್ಕರ್ ಅವರು. ನಾಡಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನು ಹಾಡಲಾಯಿತು.

ಸಿರಿಗನ್ನಡಂ ಗೆಲ್ಗೆ :: ಸಿರಿಗನ್ನಡಂ ಬಾಳ್ಗೆBack